Thursday, March 1, 2012

ನಟರಾಜು :: ಎಲೆಮರೆ ಕಾಯಿಗಳ ಜೊತೆ ಮಾತುಕತೆ.....3

ಎಲೆಮರೆ ಕಾಯಿಗಳ ಜೊತೆ ಮಾತುಕತೆ.....3
----------------------------------------
ನನ್ನ ಹೃದಯದ
ರಕ್ತದ ಕಣಕಣದಲ್ಲೂ
ಮಿಂಚುತಿದೆ ನಿನ್ನ ಹೆಸರು
ಕಂಡಾಗ
ನವಿಲುಗರಿ ಹಿಡಿದಿದ್ದ ನಿನ್ನ
ಪುಸ್ತಕದ ಪುಟಗಳಲ್ಲೆಲ್ಲಾ
"ನನ್ನ ಹೆಸರು".

ಮೇಲಿನ ಸಾಲುಗಳನ್ನು ಬರೆದ ಕವಿಗೊಮ್ಮೆ

"ರಾಘವೇಂದ್ರರವರೆ, ಪ್ರೀತಿಗೆ ಹಾಗು ಅದರ ಒಡೆಯನಿಗೆ ಒಂದು ಮುಗ್ಧತೆ ಇರುತ್ತೆ. ನಿಮ್ಮ ಕಣ್ಣುಗಳಲ್ಲಿ ಹಾಗು ನಿಮ್ಮ ಕವಿತೆಗಳಲ್ಲಿ ಅದು ಎದ್ದು ಕಾಣುತ್ತೆ.. ಪುಸ್ತಕದಲ್ಲಿ ಹೆಸರು ಬರೆಸಿಕೊಂಡ ನೀವು ಪುಣ್ಯವಂತರು...." ಅಂತ ನಮ್ಮ ಕನ್ನಡ ಬ್ಲಾಗಿನಲಿ ಮೇಲಿನ ಕವಿತೆಯ ಸಾಲುಗಳಿಗೆ ಪ್ರತಿಕ್ರಿಯೆಯೊಂದನು ಬರೆದಿದ್ದೆ...

ಆ ಕವಿಗೂ ನನಗೂ ಬ್ಲಾಗಿನ ಲೋಕದಲಿ ಮುಖಾಮುಖಿಯಾದದ್ದು ಅದೇ ಮೊದಲು..ನಂತರದ ದಿನಗಳಲ್ಲಿ ಅದೇ ಕವಿ..

ಯಾವುದೋ ಪುಸ್ತಕದ ಮಡಿಲಲ್ಲಿ,
ಹಾಯಾಗಿ ಮಲಗಿದ್ದೆ ನಾನು..
ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,
ನನ್ನ. ಅಬ್ಬಾ..! ದೋಣಿಯಾಗಿದ್ದೆ ನಾನು.

ಅಂತ ಬರೆದು ಗೆಳೆಯರೊಬ್ಬರಿಂದ ಕಾಮೆಂಟೊಂದರಲಿ 5 ಸ್ಟಾರ್ ಗಳನ್ನು ಪಡೆದಿದ್ದರು..

"ಯಾರು ಈ ಕವಿ?" ಎಂದು ಕುತೂಹಲದಿಂದ ಈ ಕವಿಯ ಫೇಸ್ ಬುಕ್ ನ ಪುಟದ ಒಳ ಹೊಕ್ಕಿದಾಗ ದಿನಾಂಕ 30.10.2007 ಕನ್ನಡ ಪ್ರಭ ಎಂಬ ಫೋಟೋ ಕಣ್ಣಿಗೆ ಬಿದ್ದಿತ್ತು..ನಂತರ ಅಚ್ಚರಿಯಿಂದ ಆ ಫೋಟೋದಲ್ಲಿ ಸೂಚಿಸಿದ್ದ ವೆಬ್ ತಾಣವೊಂದರ ಒಳಹೊಕ್ಕಿದ್ದೆ..

ಚಿತ್ರದುರ್ಗ ಜಿಲ್ಲೆಗೆ ಬಹು ಪುರಾತನ ಇತಿಹಾಸವಿದೆ. ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವ (ಬೆಂಗಳೂರಿನಿಂದ 200 ಕಿ.ಮೀ, ಹಾಗೂ ಹಂಪೆಯಿಂದ 120 ಕಿ.ಮೀ. ದೂರ) ಚಿತ್ರದುರ್ಗ ಜಿಲ್ಲೆಯು ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು ಎಂಬ ಆರು ತಾಲ್ಲೂಕುಗಳನ್ನು ಒಳಗೊಂಡಿದ್ದು, ಸುಮಾರು 1046 ಗ್ರಾಮಗಳನ್ನು ಹೊಂದಿದೆ.............

ಎಂದು ಚಿತ್ರದುರ್ಗದ ಬಗ್ಗೆ ಕಿರು ಪರಿಚಯದ ಪುಟ ಹೊತ್ತಿರುವ ಚಿತ್ತಾರ ದುರ್ಗ ವೆಂಬ ಕನ್ನಡ ವೆಬ್ ತಾಣವನ್ನು ನೋಡಿ ಖುಷಿಯಾಗಿದ್ದೆ. ಚಿತ್ತಾರ ದುರ್ಗ ವೆಂಬ ಚಿತ್ರದುರ್ಗದ ಪ್ರಥಮ ಕನ್ನಡ ವೆಬ್ ಹುಟ್ಟು ಹಾಕಿದ ಗೆಳೆಯ ನಮ್ಮ ಕನ್ನಡ ಬ್ಲಾಗಿನಲಿ ಆಗಾಗ ಕವಿತೆಗಳನ್ನೂ ಬರೆಯುತ್ತಾರೆ ಎಂದು ತಿಳಿದು ಮತ್ತಷ್ಟು ಖುಷಿಯಾಗಿ ಈ ಕವಿ ಗೆಳೆಯನನ್ನು ಎಲೆ ಮರೆ ಕಾಯಿಗಳ ಜೊತೆ ಮಾತುಕತೆಗೆ ಕರೆತರುವ ಇಚ್ಚೆಯಾಗಿತ್ತು..

ಸದಾ ಬ್ಯುಸಿಯಾಗಿರುವ ಈ ಗೆಳೆಯನ ಜೊತೆಗೆ ಮಾತುಕತೆಗೆ ಮುನ್ನ ಈ ಗೆಳೆಯನ ಬ್ಲಾಗೊಂದರ ಕೊಂಡಿಯನ್ನು ಹಿಡಿದು ಹೊರಟಾಗ ಈ ಬರಹಗಾರ ಕನಿಷ್ಠ ಒಂದು ಡಜನ್ ಬ್ಲಾಗಿನ ಮಾಲಿಕ ಎಂದು ತಿಳಿದು ಮತ್ತಷ್ಟು ಅಚ್ಚರಿಯಾಯಿತು. ಒಂದು ಬ್ಲಾಗ್ ಅನ್ನು ಹೇಗೆ ವಿನ್ಯಾಸ ಮಾಡಬೇಕು.. ಅದು ಓದುಗರಿಗೆ ತಲುಪುವಂತೆ ಏನು ಮಾಡಬೇಕು.. ಅನ್ನೋದನ್ನು ಈ ಗೆಳೆಯನಿಂದ ಕೇಳಿ ಕಲೀಬೇಕು ಅನ್ನಿಸಿತ್ತು..ಆ ಅನಿಸುವಿಕೆಯ ನಡುವೆ...

ಕಳೆದ ಮೂರ್ನಾಲ್ಕು ವರ್ಷಗಳಿಂದ ಬ್ಲಾಗಿಗ ನಾಗಿರುವ ಫೇಸ್ ಬುಕ್ಕಿನಲಿ R Raghavendra Padmashali ಎಂದಿರುವ ಆರ್. ರಾಘವೇಂದ್ರ ಎಂಬ ಹೆಸರಿನ ಈ ಕವಿಯು ವೃತ್ತಿಯಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಈ ಯುವ ಕವಿಯ ಅತಿ ಕಿರು ಪರಿಚಯವನ್ನು ಅವರದೇ ಮಾತಿನಲ್ಲಿ ಕೇಳಿ..

"ನಾನೊಬ್ಬ ಬ್ಲಾಗಿಗ. ನಾನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವನು. ಕನ್ನಡದ ಮೇಲೆ ತುಸು ಪ್ರೀತಿ ಜಾಸ್ತಿ. ನಾನು ಮತ್ತು ನನ್ನ ಗೆಳೆಯರು, ಪ್ರೋತ್ಸಾಹಕರೊಂದಿಗೆ ಸೇರಿ ಮಾಡಿದ ಮೊದಲ ವೆಬ್ ಸೈಟ್ ಎಂದರೇ ಚಿತ್ತಾರದುರ್ಗ.ಕಾಂ (www.chitharadurga.com). ಈ ವೆಬ್ ತಾಣವು ಕರ್ನಾಟಕದ ಮೊದಲ ಕನ್ನಡ ಜಿಲ್ಲಾ ವೆಬ್ ಸೈಟ್ ಕೂಡ ಆಗಿದೆ.

ಆಗೊಮ್ಮೆ ಈಗೊಮ್ಮೆ ಕವಿತೆ ಬರೆಯುವ ಹುಚ್ಚು. ಮನಸಿನಲಿ ಮೂಡುವ ಅದೆಷ್ಟೋ ಭಾವನೆಗಳಿಗೆ ತುಂಬಾ ಸರಳತೆಯಿಂದ ಎಂಥವರಿಗೂ ಅರ್ಥವಾಗುವಂತೆ ಬರೆಯುವ ಪ್ರಯತ್ನ ಮಾಡುತ್ತಿರುತ್ತೇನೆ. ಇನ್ನಷ್ಟೂ ಅನೇಕ ಬ್ಲಾಗ್ ಗಳನ್ನು ತೆರೆಯುವ ಹಾಗೂ ಕನ್ನಡ ವೆಬ್ ಸೈಟ್ ಗಳನ್ನು ಮಾಡುವ ಕನಸಿದೆ. ತಂತ್ರಜ್ಞಾನ ಬಳಸಿ ಕನ್ನಡದ ಕಂಪನ್ನು ಕನ್ನಡೇತರರಿಗೂ ಪರಿಚಯಿಸುವ ಚಿಕ್ಕದೊಂದು ಆಸೆಯಿದೆ."

ಎರಡೇ ಮಾತು ಹೇಳಿ ಮಾತು ಮುಗಿಸಿದ ಈ ಕವಿಯ ಕವನಗಳ ಓದಲು ಅವರ ಬ್ಲಾಗೊಂದರ ವಿಳಾಸ ಈ ಕೆಳಗಿನಂತಿದೆ..
http://preethiyahadu.blogspot.com/

ತಡವಾಗಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು..ಎಳ್ಳು ಬೆಲ್ಲ ಕಳುಹಿಸಿಕೊಡಿ... :-)

ಮತ್ತೆ ಸಿಗೋಣ..

ನಿಮ್ಮ ಪ್ರೀತಿಯ
ನಟರಾಜು
http://smnattu.blogspot.com/

22 comments:

 1. ಬಹಳಾ ಚೆನ್ನಾಗಿದೆ ಪರಿಚಯ .. ಮತ್ತು ಚಿತ್ರದುರ್ಗ .. ಕನ್ನಡ ವೆಬ್`ಸೈಟ್.. ಹಬ್ಬದ ಶುಭಾಶಯಗಳು... :)

  ReplyDelete
 2. ನಟರಾಜುರವರೆ,
  ಶ್ರೀ ರಾಘವೆಂದ್ರ ಪದ್ಮಶಾಲಿ ಇವರ ವೆಬ್ ತಾಣ್ ಗಳು ಅದ್ಬುತ,
  ಅವರ ಹವ್ಯಾಸ ಮೆಚ್ಚತಕ್ಕದ್ದು ಹಾಗು ಬಹಳ ಸ್ವಾರಶ್ಯವಾಗಿದೆ.
  ಅವರ ಚಿತ್ರದುಗ್ರ ಕಾಮ್ ನಲ್ಲಿ ಬರುವ ಬನದ ಹೂಗಳು, ನನದೆ ಪ್ರೀತಿ,
  ಹಾಗು ಕಣ್ ಹನಿ ಮತ್ತು ಇನ್ನೊಂದು ಪ್ರೀತಿಯ ಹಾಡು ಇಲ್ಲಿ ಬರುವ
  ಕವನಗಳು ಒಂದಕ್ಕಿಂತ ಇನ್ನೊಂದು ಉತ್ತಮವಾಗಿವೆ.
  ಇವರ ಪರಿಚಯ ಮಾಡಿದ್ದು ತಾವು ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಿ, ದನ್ಯವಾದಗಳು !!

  ReplyDelete
 3. ಭಾವಗಳನ್ನು ಚೆನ್ನಾಗಿದೆ ಸೆರೆ ಹಿಡಿಯಬಲ್ಲರು ಮಾನ್ಯ ರಾಘವೇಂದರ ಪದ್ಮಶಾಲಿಯವರು.ಉತ್ತಮ ಕವಿತೆ ಅವರಿಂದ ನಿರೀಕ್ಷಿಸಬಹುದು. ಕೆಲವು ಮಾತುಗಳ ಸಲಹೆ ನೀಡಿದ್ದೇವು. ನಟರಾಜಣ್ಣ ನಿಮ್ಮ ಮಾತುಗಳು ಬರಹದಲ್ಲಿ ಸುಂದರವಾಗಿ ಹೊರಬಿದ್ದಿದೆ. ಸುಂದರವಾಗಿದೆ. ವಂದನೆಗಳು.

  ReplyDelete
 4. ರಾಘವೇಂದ್ರ....:) ನಿಮ್ಮ ಬಗೆ ತಿಳಿದು ಬಹಳ ಖುಷಿ ಆಯಿತು...ಅಭಿನಂದನೆಗಳು...ಹಾಗು ನಟರಾಜು...ನಿಮ್ಮ ಪರಿಚಯಿಸಿದ ಶ್ರಮಕ್ಕೂ ನಮನ..:)

  ReplyDelete
 5. ನಿಮ್ಮಲ್ಲರ ಪ್ರೀತಿಗೆ... ನಿಜಕ್ಕೂ ಮೂಕನಾಗಿದ್ದೇನೆ. ಮಾತೇ ಬರುತ್ತಿಲ್ಲ..!! ಧನ್ಯವಾದಗಳು...@Nataraju Seegekote Mariyappa, Prashanth P Khatavakar, Ramesh Jagapur, Ravi Murnad and Sunitha Manjunath ..ರವರಿಗೆ...

  ReplyDelete
 6. ಒಳ್ಳೆಯದೇ ಆಗಲಿ :)

  ReplyDelete
 7. ಹಿರಿಯರು ಏನದಾರು ಸೂಕ್ತ ಸಲಹೆ ನೀಡಿದಾಗ ತುಂಬಾ ವಿನಮ್ರತೆಯಿಂದ ಸ್ವೀಕರಿಕೊಳ್ಳುವ ರಾಘವೇಂದ್ರರ ಬಗ್ಗೆ ನಟರಾಜಣ್ಣ ಬರೆದ ಲೇಖನ ಕಂಡು ತುಂಬಾ ಸಂತೋಷವಾಯಿತು , ನಿಮ್ಮಿಂದ ನಮಗೆ ಇನ್ನಷ್ಟೂ ಚೆಂದದ ಕವಿತೆಗಳನ್ನು ಸವಿಯುವಂತಾಗಲಿ

  ReplyDelete
 8. ಖಂಡಿತ ಇನ್ನಷ್ಟೂ ಒಳ್ಳೆಯ ಕವಿತೆಗಳನ್ನು ಬರೆಯುವ ಪ್ರಯತ್ನ ಮಾಡುತ್ತೇನೆ...

  ReplyDelete
 9. ತಡವಾಗಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು..ಎಳ್ಳು ಬೆಲ್ಲ ಕಳುಹಿಸಿಕೊಡಿ... :-)

  ಮತ್ತೆ ಸಿಗೋಣ.. ಸೀಗೆ ಕೋಟೆಯವರೆ ಸೀಗೆ ಕಾಯಿ ಇದೆಯಾ..?
  ಎಲ್ಲಿಗೆ ಕಳುಹಿಸಿ ಕೊಡಬೇಕು ನಮ್ಮ ಸಂಕ್ರಾಂತಿ ಕಾಳು ??
  ನಿಮ್ಮ ಹೆಸರು ಹೇಳಿ ಇಟ್ಟಿದ್ದು ಖಾಲಿಯಾಗುತ್ತಿದೆ, ಬೇಗನೇ ವಿಳಾಸ ಕಳುಹಿಸೋಣವಾಗಲಿ
  ನಿಮ್ಮ ಪ್ರಯತ್ನಕ್ಕೆ ನಮ್ಮೆಲ್ಲರ ಹರಕೆ ಹಾರೈಕೆಗಳು

  ReplyDelete
 10. ಮನಸೂರೆಗೊಳ್ಳುವ ಮನೋಜ್ನ ಕವಿತೆ ಚಿತ್ರಿಸುವ ಶ್ರೀಯುತ ಆರ್ ರಾಘವೇಂದ್ರರು ಪ್ರತಿಭಾವಂತರು. ಸುಂದರವಾಗಿ ಪರಿಚಯಿಸಿಕೊಟ್ಟ ನಟರಾಜುರಾವರಿಗೆ ವಂದನೆಗಳು

  ReplyDelete
 11. ರಾಘವೇಂದ್ರರವರು ಸೂಕ್ಷ್ಮ ಭಾವಾಭಿವ್ಯಕ್ತಿಗಳನ್ನು ಸುಂದರವಾಗಿ ಅರಳಿಸಬಲ್ಲ ಬರಹಗಾರ.. ಅವರೊಂದಿಗಿನ ನಿಮ್ಮ ಮಾತು ಕತೆ ಖುಷಿ ನೀಡಿತು ನಟರಾಜಣ್ಣ.. ಅವರ ಚಿತ್ರದುರ್ಗ.ಕಾಂ ಬಗ್ಗೆ ಕೇಳಿದಮೇಲೆ ಅವರಿಗೊಂದು ಭೇಷ್ ಹೇಳಲೇಬೇಕು.. ನಿಮ್ಮ ಈ ಮಾತುಕತೆ ಮುಂದುವರೆಯಲಿ ನಟರಾಜಣ್ಣ.. ನಿಮ್ಮಿಬ್ಬರಿಗೂ ಅಭಿನಂದನೆಗಳು.. ಶುಭವಾಗಲಿ..:)))

  ReplyDelete
 12. ಗೆಳೆಯರೇ, ಕನ್ನಡ ಬ್ಲಾಗಿನ ಎಲೆ ಮರೆ ಕಾಯಿಗಳಿಗೆ ನಿಮ್ಮ ಪ್ರೋತ್ಸಾಹದ ನುಡಿ ಸದಾ ಜೊತೆ ಇರಲಿ.. ಮತ್ತಷ್ಟು ಎಲೆಮರೆ ಕಾಯಿಗಳ ಜೊತೆ ಮಾತನಾಡುವ ಕುತೂಹಲ ನಿಮಗಿರುವಂತೆ ನನಗೂ ಇದೆ. ನಿಮ್ಮ ಮೆಚ್ಚಿನ ನುಡಿಗಳಿಗೆ ನಮನ...:-)

  ReplyDelete
 13. ಯುವ ಕವಿ ರಾಘವೇಂದ್ರ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ .ಕನ್ನಡಮ್ಮನ ಸೇವೆ ಮುಂದುವರೆಸಿ..!! ರಾಘವೇಂದ್ರರನ್ನು ಪರಿಚಯಿಸಿದ ನಟರಾಜ್ ನಿಮಗೆ ಇದೋ ನಮನಗಳು.....

  ReplyDelete
 14. ತಮ್ಮಲ್ಲಿರುವ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಚೆಂದದ ಕವಿತೆ ಸೃಷ್ಟಿ ಮಾಡೋ .. ನನ್ನಂತ ಎಷ್ಟೋ ಕವಿಗಳಿಗೆ "ಕನ್ನಡ ಬ್ಲಾಗ್" ಎಂಬ ವೇದಿಕೆ ಕಲ್ಪಿಸಿಕೊಟ್ಟ ರವಿ ಮೂರ್ನಾಡರಿಗೆ ಹೃತ್ಪೂರ್ವಕ ಧನ್ಯವಾದಗಳು ಹೇಳಬೇಕು. ಹಾಗೂ "ಎಲೆಮರೆಕಾಯಿ" ಶೀರ್ಷಿಕೆಯಡಿ ಹೊಸ ಪ್ರತಿಭೆಗಳ ಅನಾವರಣ ಮಾಡಲು ಹೊರಟಿರುವ ನಟರಾಜು ರವರಿಗೆ ಧನ್ಯೋಸ್ಮಿ. ನಿಸ್ವಾರ್ಥ ಕೆಲಸ ಮಾಡಿದಾಗ ಖಂಡಿತ ಫಲ ದೊರಕಿಯೇ ದೊರಕುತ್ತದೆ ಎನ್ನುವುದಕ್ಕೆ ಇವರುಗಳು ಕೈಗೊಂಡಿರುವ ಕಾರ್ಯದ ಚಿಕ್ಕ ಉದಾಹರಣೆ ಸಾಕು ಎನಿಸುತ್ತದೆ. ಇವರುಗಳ ಪ್ರಯತ್ನಗಳು ಯಾವುದೇ ಅಡೆತಡೆಯಿಲ್ಲದೇ ನಿರಂತರವಾಗಿ ಸಾಗಲಿ.. ಪವಿತ್ರ ಗಂಗೆಯಂತೆ.

  ReplyDelete
 15. ಪ್ರತಿಭಾವಂತ ಯುವ ಬರಹಗಾರ ಮಾನ್ಯ ರಾಘವೇಂದ್ರ ಪದ್ಮಶಾಲಿಯವರ ಬಗ್ಗೆ ತಿಳಿದು ಸಂತಸವಾಯಿಗು. ಅವರಿಗೆ ಶುಭವಾಗಲಿ. ಮತ್ತಷ್ಟು ಕೀರ್ತಿ ದೊರಕಲಿ.... ವಂದನೆಗಳು...

  ReplyDelete
 16. ಶ್ರೀಯುತರ ಕವನಗಳನ್ನು ಇಷ್ಟಪಟ್ಟು ಓದಿ ಪ್ರತಿಕ್ರಿಯಿಸಿದವನು ನಾನು.ಅವರೊಬ್ಬ ಭಾವುಕ ಕವಿ.ಸುಂದರವಾಗಿ ಅರ್ಥಪೂರ್ಣವಾಗಿ ಕವನ ಕಟ್ಟುವ ಜಾಣ್ಮೆ ಅವರದು.ಮುದ್ದಾದ ಮನಸಿನ ಈ ಕವಿಯ ಪರಿಚಯ ನಿಮ್ಮಿಂದಾಯಿತು.ಅವರೂ ನೀವು ಇಬ್ಬರೂ ಧನ್ಯ ಜೀವಿಗಳು.
  ........................................................

  ReplyDelete
 17. ಒಳ್ಳೆ ಕೆಲ್ಸ ಮಾಡ್ತಿದ್ದೀರಿ...ಮುಂದ್ವರ್ಸಿ ಸಾ...

  ReplyDelete
 18. ರಾಘವೇಂದ್ರರ ... ಹಲವು ಕವಿತೆಗಳಲ್ಲಿ.. ಪ್ರೀತಿಯ ಹಲವು ಮುಖಗಳನ್ನು, ಪ್ರೀತಿಯ ಹಸಿ ಹಸಿ ಭಾವನೆಗಳನ್ನು ಕಾಣಬಹುದು. ಹೆಣ್ಣಿನಂತೆಯೇ ಯೋಚಿಸಿ, ಅವರ ಭಾವನೆಗಳನ್ನು ಅದು ಹೇಗೆ ಬರೆಯುತ್ತಾರೋ ಗೊತ್ತಿಲ್ಲ. ಆದರೂ ಸುಂದರ ಸಾಲುಗಳು... ಅವರು ಬರೆದದ್ದು

  ReplyDelete
 19. ಧನ್ಯವಾದಗಳು ಗೆಳೆಯ Mohan V Kollegal.. ನಿಮ್ಮ ಪ್ರೀತಿಗೆ ವಂದನೆಗಳು.

  ReplyDelete
 20. ಧನ್ಯವಾದಗಳು.. ಆತ್ಮೀಯ Banavasi Somashekhar ರವರಿಗೆ..

  ReplyDelete
 21. ಶಿವಣ್ಣ (@ಹೃದಯ ಶಿವ).. ಧನ್ಯವಾದಗಳು

  ReplyDelete
 22. Sharada Shaaru ರವರಿಗೆ .. ಧನ್ಯವಾದಗಳು

  ReplyDelete